ದಾವಣಗೆರೆ: ಮೀಸಲಾತಿಗಾಗಿ ವೀರಶೈವ ಲಿಂಗಾಯತ ಸಮಾಜದ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.
ಹರಿಹರದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮುದಾಯದ ಪಾದಯಾತ್ರೆ ಸಮಾವೇಶಲ್ಲಿ ಮಾತನಾಡಿದ ಅವರು, 'ನಾನು ಪಂಚಮಸಾಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಕೆಲವು ಮಂಗ ನನ್ನ ಮಕ್ಕಳು ಮೂರು ಸಾವಿರ ಮಠದ 500 ಕೋಟಿ ರೂ. ಆಸ್ತಿ ನುಂಗಿದ್ದಾರೆ. ನಾನು ಅದನ್ನ ಉಳಿಸಲು ಹೋರಾಟ ಮಾಡುತ್ತಿದ್ದೇನೆ. ನಾನು ಯಾವುದೇ ಪುಢಾರಿಗಳಿಗೆ ಬಗ್ಗಲ್ಲ' ಎಂದು ಅಸಂವಿಧಾನಿಕ ಪದ ಬಳಸಿ ವಾಗ್ದಾಳಿ ನಡೆಸಿದರು.
PublicNext
29/01/2021 10:05 am