ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಸಂಸತ್‌ ಅಧಿವೇಶನ ಆರಂಭ

ನವದೆಹಲಿ: ಸಂಸತ್‌ನ ಅಧಿವೇಶನ ಇಂದಿನಿಂದ (ಶುಕ್ರವಾರ) ಶುರುವಾಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೊರೊನಾ ನಿಯಮದ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳು ತಲಾ ಐದು ಗಂಟೆಗಳಿಗೆ ನಿಗದಿಯಾಗಿವೆ. ಆರ್ಥಿಕ ಸಮೀಕ್ಷೆಯೂ ಶುಕ್ರವಾರವೇ ಮಂಡನೆಯಾಗಲಿದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಮಂಡಿಸಲಿದ್ದಾರೆ.

ರಾಜ್ಯಸಭೆಯ ಕಲಾಪಗಳು ಬೆಳಗ್ಗೆ, ಲೋಕಸಭೆ ಕಲಾಪಗಳು ಸಂಜೆ ವೇಳೆ ನಡೆಯಲಿವೆ. ಅಧಿವೇಶನದ ಮತ್ತೊಂದು ಪ್ರಮುಖ ಅಂಶವೆಂದರೆ ವಾರಾಂತ್ಯಗಳಲ್ಲಿ ಕಲಾಪಗಳು ನಡೆಯುವುದಿಲ್ಲ. ಆದರೆ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಪ್ರತಿಭಟನೆ ಹಾಗೂ ಜನವರಿ 26ರಂದು ದೆಹಲಿ ಕೆಂಪುಕೋಟೆ ಆವರಣ, ಇತರ ಪ್ರದೇಶಗಳಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ವಿಪಕ್ಷಗಳು ಸರ್ಕಾರದ ವಿರುದ್ಧ ಧರಣಿಗೆ ಇಳಿಯುವ ಸಾಧ್ಯತೆ ಇದೆ.

Edited By : Vijay Kumar
PublicNext

PublicNext

29/01/2021 07:53 am

Cinque Terre

34.61 K

Cinque Terre

1

ಸಂಬಂಧಿತ ಸುದ್ದಿ