ಮುಂಬೈ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಣ್ಣಾ ಹಜಾರೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣಸಿದ್ಧಿಯಲ್ಲಿ ಜನವರಿ 30ರಿಂದ ಪ್ರತಿಭಟನೆ ನಡೆಸಲು ಅಣ್ಣಾ ಹಜಾರೆ ಇಂದು ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಬೆಂಬಲಿಗರೆಲ್ಲರೂ ತಮ್ಮ ತಮ್ಮ ಸ್ಥಳದಿಂದಲೇ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಅಂದೋಲನ ಸಂಬಂಧ ಜನವರಿ 26ರಂದು ನಡೆದ ಘಟನೆ ಕುರಿತು ನಮಗೆಲ್ಲರಿಗೂ ವಿಷಾದವಿದೆ. ನಾನು ಯಾವತ್ತೂ ಅಹಿಂಸಾತ್ಮಕ ಹಾಗೂ ಶಾಂತಿಯುತ ಪ್ರತಿಭಟನೆಯನ್ನು ಬಯಸುತ್ತೇನೆ. ಕಳೆದ 40 ವರ್ಷಗಳಲ್ಲಿ ಅನೇಕ ಬಾರಿ ಸತ್ಯಾಗ್ರಹ ನಡೆಸಿದ್ದೇನೆ. 2011ರಲ್ಲಿ ದೆಹಲಿಯಲ್ಲಿ ನಡೆದ ಲೋಕಪಾಲ್ ಅಂದೋಲನದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಆದರೆ ಒಂದೇ ಒಂದು ಕಲ್ಲು ಕೂಡ ಬೀಳಲಿಲ್ಲ. ಇದನ್ನೇ ಗಾಂಧೀಜಿ ನಮಗೆ ಕಲಿಸಿ ಕೊಟ್ಟಿದ್ದಾರೆ. ಯಾವುದೇ ರೀತಿಯ ಅಂದೋಲನದಲ್ಲಿ ಹಿಂಸಾಚಾರ ಮಾಡಬಾರದು. ಇದನ್ನೇ ಎಲ್ಲ ಬೆಂಬಲಿಗರಲ್ಲೂ ವಿನಂತಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
PublicNext
28/01/2021 09:23 pm