ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೈ' ನಾಯಕರ ವಿರುದ್ಧ ಮಾತಾಡಿದವರೇ ಸಿಎಂ ಟಾರ್ಗೆಟ್: ಯತ್ನಾಳ್ ಗರಂ

ವಿಜಯಪುರ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ಮಾತನಾಡುವವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟಾರ್ಗೆಟ್ ಮಾಡುತ್ತಿದ್ದಾರೆ‌ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಅಧಿವೇಶನದಲ್ಲಿ ಸಚಿವ ಮಾಧುಸ್ವಾಮಿ ಸಮರ್ಥವಾಗಿ ವಾದ ಮಂಡಿಸಿದವರು. ಅವರು ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್ ನಾಯಕರನ್ನು ಮಾತನಾಡದಂತೆ ಬಾಯಿ ಕಟ್ಟಿ ಹಾಕಿದ್ದರು. ಆದರೆ ಈಗ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ವಿರುದ್ಧ ಮಾತನಾಡಿದವರನ್ನು ಸಿಎಂ ಯಡಿಯೂರಪ್ಪ ಮುಗಿಸಲು ಮುಂದಾಗಿರುವುದು ದುರ್ದೈವದ ಸಂಗತಿ ಎಂದು ಆರೋಪಿಸಿದರು.

ಸಿಎಂ ಯಡಿಯೂರಪ್ಪ ಅವರು ನನ್ನ ಮೇಲಿನ ದ್ವೇಷದಿಂದ ಯಾವುದೇ ಅಧಿಕಾರಿಗಳನ್ನು ಬದಲಾವಣೆ ಮಾಡಿದರೂ ಚಿಂತೆಯಿಲ್ಲ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರವಿಲ್ಲ. ಭ್ರಷ್ಟಾಚಾರ ಇದ್ದರೆ ಮಾತ್ರ ನಾನು ಭಯ ಪಡಬೇಕಾಗಿತ್ತು. ನೂರು ಇಂಟಲಿಜನ್ಸ್ ಗಳನ್ನು ಬಿಟ್ಟರೂ ನನಗೆ ಏನೂ ಆಗುವುದಿಲ್ಲ. ತಪ್ಪು ಮಾಡದ ವ್ಯಕ್ತಿಗೆ ಭಯವೇ ಇರುವುದಿಲ್ಲ ಎಂದು ಗುಡುಗಿದರು.

Edited By : Vijay Kumar
PublicNext

PublicNext

27/01/2021 05:28 pm

Cinque Terre

35.27 K

Cinque Terre

0

ಸಂಬಂಧಿತ ಸುದ್ದಿ