ವಿಜಯಪುರ: ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಬೇರೆ ಧ್ವಜ ಹಾರಿಸಿರುವ ದುಷ್ಕೃತ್ಯದ ಹಿಂದೆ ಪಾಕಿಸ್ತಾನ, ಚೀನಾ ಹಾಗೂ ನಮ್ಮ ದೇಶದಲ್ಲಿ ಹತಾಶೆಗೊಂಡಿರುವ ಪಕ್ಷಗಳ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, “ದೇಶದ ಪ್ರಧಾನಿ ನರೇಂದ್ರ ಅವರ ವರ್ಚಸ್ಸು ಸಹಿಸಲಾಗದೇ ಕಾಂಗ್ರೆಸ್, ಕಮ್ಯುನಿಸ್ಟ್ , ಆಮ್ಆದ್ಮಿ ಪಕ್ಷಗಳು ಉದ್ದೇಶಪೂರ್ವಕವಾಗಿ ಕೆಂಪುಕೋಟೆ ಮೇಲೆ ಬೇರೆ ಧ್ವಜ ಹಾರಿಸಲು ಪ್ರೇರೇಪಿಸಿದ್ದಾರೆ. ಇನ್ನೂ 20 ವರ್ಷವಾದರೂ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುತ್ತದೆ ಎನ್ನುವ ಹತಾಶೆ ಭಾವನೆಯಿಂದ ಇಂಥ ಕೃತ್ಯಕ್ಕೆ ಕುಮ್ಮಕ್ಕು ನೀಡಲಾಗಿದೆ” ಎಂದು ಶಂಕೆ ವ್ಯಕ್ತಪಡಿಸಿದರು.
PublicNext
27/01/2021 04:53 pm