ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮಾರಕವನ್ನು ಮರೀನಾ ಬೀಚ್‌ನಲ್ಲಿ ಇಂದು ತಮಿಳುನಾಡು ಸಿಎಂ ಇ.ಕೆ. ಪಳಿನಿಸ್ವಾಮಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಓ. ಪನೀರಸೆಲ್ವಂ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಬಳಿಕ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಜಯಲಲಿತಾ ಅವರ ಸ್ಮಾರಕವು 50 ಸಾವಿರ ಚದರ ಅಡಿ ವಿಸ್ತೀಣದಲ್ಲಿದ್ದು, 79.75 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇದು ಫೀನಿಕ್ಸ್ ಆಕಾರದಲ್ಲಿದೆ.
PublicNext
27/01/2021 04:28 pm