ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

4 ವರ್ಷದ ಬಳಿಕ ಬಿಡುಗಡೆಯಾದ ಚಿನ್ನಮ್ಮ

ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣದಲ್ಲಿ ಕೊನೆಗೂ ನಾಲ್ಕು ವರ್ಷಗಳ ಜೈಲುವಾಸ ನಂತರ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ಅವರು ಬಿಡುಗಡೆಗೊಂಡಿದ್ದಾರೆ.

ನಿಗದಿಯಂತೆ ಇಂದು ಬುಧವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಅವರನ್ನು ಬಿಡುಗಡೆಯ ವಿಧಿವಿಧಾನಗಳನ್ನು ಪೂರೈಸುವ ಮೂಲಕ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಶಶಿಕಲಾ ಅವರು ಇದ್ದ ಟ್ರಾಮಾ ಕೇಂದ್ರದ ಒಳಗೆ ಶಶಿಕಲಾ ಅವರ ವಕೀಲರೊಂದಿಗೆ ಜೈಲು ಅಧಿಕಾರಿ ಹೋಗಿ ಅವರ ಸಹಿ ಪಡೆಯುವ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದರು.

ಶಶಿಕಲಾ ಅವರನ್ನು ಬಿಡುಗಡೆ ಮಾಡುವ ಹೊತ್ತಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್ ಶಿಷ್ಠಾಚಾರಗಳನ್ನು ಪೂರ್ಣಗೊಳಿಸಲಾಗಿದೆ. ಅವರ ಆರೋಗ್ಯ ಈಗ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ದೃಢಪಡಿಸಿದೆ.

Edited By : Nirmala Aralikatti
PublicNext

PublicNext

27/01/2021 12:27 pm

Cinque Terre

57.64 K

Cinque Terre

1

ಸಂಬಂಧಿತ ಸುದ್ದಿ