ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋರಾಟ ಹತ್ತಿಕ್ಕುತ್ತಿರುವುದು ಘೋರ ಅಪರಾಧ: ಎಚ್.ಕೆ ಪಾಟೀಲ್

ಗದಗ: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಹೋರಾಟ ಹತ್ತಿಕ್ಕುತ್ತಿರುವುದು ಘೋರ ಅಪರಾಧ’ ಎಂದು ಕಾಂಗ್ರೆಸ್‍ ಹಿರಿಯ ಮುಖಂಡ ಎಚ್.ಕೆ.ಪಾಟೀಲ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಇಂದು ರೈತರ ಪ್ರತಿಭಟನೆಗೆ ಅಡ್ಡಿಪಡಿಸುವ ಮೂಲಕ ಗಣರಾಜ್ಯೋತ್ಸವದ ಘನತೆ ಕಡಿಮೆ ಮಾಡಿದ್ದಾರೆ. ರೈತ ಹೋರಾಟಗಾರರ ಆಕ್ರೋಶ ಸ್ಫೋಟಗೊಳ್ಳಲು ಅವಕಾಶ ನೀಡದೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕೂಡಲೇ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವ ಮೂಲಕ ಅನ್ನದಾತರ ಹಿತ ಕಾಪಾಡಬೇಕು. ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಹೇಳಿದರು. ಗಣರಾಜ್ಯೋತ್ಸವದ ದಿನದಂದು ಅನ್ನದಾತರನ್ನು ಕಡೆಗಣಿಸಲಾಗಿದೆ ಎಂದರು

Edited By : Nagaraj Tulugeri
PublicNext

PublicNext

26/01/2021 11:28 pm

Cinque Terre

56 K

Cinque Terre

7

ಸಂಬಂಧಿತ ಸುದ್ದಿ