ಉಡುಪಿ: ನಾಳೆ ಬೆಂಗಳೂರಿನಲ್ಲಿ ರೈತ ಚಳುವಳಿ ತಯಾರಿ ಕುರಿತು ಉಡುಪಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ,
ಬೆಂಗಳೂರಿನಲ್ಲಿ ಯಾವುದೇ ಚಳುವಳಿ ಇರಲಿಕ್ಕಿಲ್ಲ. ಚಳುವಳಿ ಮಾಡುವ ಹೇಳಿಕೆಗಳು ಮಾತ್ರ ಬರುತ್ತಿವೆ. ಪ್ರತಿಭಟನೆಗೆ ಯಾರೂ ಬೆಂಬಲ ವ್ಯಕ್ತಪಡಿಸಿಲ್ಲ.ಪಂಜಾಬ್ ,ಹರ್ಯಾಣ ಬಿಟ್ರೆ ದೇಶದಲ್ಲಿ ಯಾರೂ ಬೆಂಬಲ ಕೊಟ್ಟಿಲ್ಲ.ನಾಳೆ ಬೆಂಗಳೂರಿನಲ್ಲಿ ಯಾವುದೇ ರೀತಿ ಪ್ರತಿಭಟನೆಗಳು ಆಗಲ್ಲ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ,ಬಿಜೆಪಿಗೆ ಸೇರುವವರ ದೊಡ್ಡ ಪಟ್ಟಿಯೇ ಇದೆ.ಯಾವ ಕಾಲಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನು ಪಾರ್ಟಿ ಹೈ-ಕಮಾಂಡ್ ತೀರ್ಮಾನಿಸುತ್ತದೆ.ಬಿಜೆಪಿ ಸೇರುವವರ ದೊಡ್ಡ ಪಟ್ಟಿ ಇರುವುದು ನಿಜ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
PublicNext
25/01/2021 07:33 pm