ಬೆಂಗಳೂರು: ರಾಜ್ಯ ರಾಜಕಾರಣ ನಿಜಕ್ಕೂ ನಗೆ ಪಾಟಲಿಗೆ ಈಡಾಗಿದೆ ಬಿಎಸ್ ವೈ ಸಂಪುಟದ ಸಚಿವರುಗಳ ಖಾತೆಯಲ್ಲಿ ಬದಲಾವಣೆ ಕಾರ್ಯ ಿನ್ನು ಮುಗಿದಿಲ್ಲ.ಕೆಲ ಸಚಿವರು ಖಾತೆ ಸಿಕ್ಕಲ್ಲವೆಂದು ಬೇಸರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಸಿಕ್ಕ ಖಾತೆ ಒಪ್ಪಿಕೊಳ್ಳದೆ ಕಿತ್ತಾಟ ನಡೆಸಿದ್ದಾರೆ ಹೀಗಾಗಿಯೇ ಖಾತೆ ಸಂಚಿಕೆ ಕಾರ್ಯ ಇನ್ನು ಮುಗಿಯುತ್ತಿಲ್ಲ.
ಇಂದು ಡಾ.ಕೆ ಸುಧಾಕರ್, ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರುಗಳ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತವೂ ದೊರೆತಿದೆ.
ಆರೋಗ್ಯ ಸಚಿವ ಕೆ ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಈ ಖಾತೆಯನ್ನು ಮಾಧುಸ್ವಾಮಿಯವರಿಗೆ ನೀಡಲಾಗಿತ್ತು. ಇದಕ್ಕೆ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜೆ ಸಿ ಮಾಧುಸ್ವಾಮಿ ಅವರಿಗೆ ಖಾತೆ ಬದಲಾವಣೆ ಮಾಡಿ ಪ್ರವಾಸೋದ್ಯಮ, ಪರಿಸರ ಖಾತೆ ಮತ್ತು ಪರಿಸರ ವಿಜ್ಞಾನ ಖಾತೆಯನ್ನು ನೀಡಲಾಗಿದೆ.
ಪ್ರವಾಸೋದ್ಯ ಸಚಿವರಾಗಿದ್ದ ಆನಂದ್ ಸಿಂಗ್ ಅವರಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.
PublicNext
25/01/2021 04:52 pm