ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿಗೆ 4ನೇ ಬಾರಿಯೂ ದೇಶದ ಅತ್ಯುತ್ತಮ ಸಿಎಂ ಪಟ್ಟ

ಹೊಸದಿಲ್ಲಿ: ಸತತ ನಾಲ್ಕು ಬಾರಿಯು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎನ್ನುವ ಪಟ್ಟವನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಂಕರಿಸಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ವರ್ಷದ ಮಾರ್ಚ್ ಗೆ ಅಧಿಕಾರ ಪಡೆದುಕೊಂಡು ನಾಲ್ಕು ವರ್ಷ ಪೂರ್ಣಗೊಳಿಸಲಿದ್ದಾರೆ.

ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ನಡೆಸಿದ 2021ರ ಸಾಲಿನ ಸಮೀಕ್ಷೆಯಲ್ಲಿ ಶೇ.25ರಷ್ಟು ಮತಗಳನ್ನು ಯೋಗಿ ಆದಿತ್ಯನಾಥ್ ಪಾಲಾಗಿದೆ. ಅತ್ಯುತ್ತಮ ಹಾಗೂ ಉತ್ತಮ ಸಾಧನೆ ತೋರಿದ ಮುಖ್ಯಮತ್ರಿ ಯಾರು ಎನ್ನುವ ಪ್ರಶ್ನೆಗೆ ಅನೇಕರು ಯೋಗಿ ಆದಿತ್ಯನಾಥ್ ಎಂದಿದ್ದಾರೆ. ಇನ್ನು ಸಮೀಕ್ಷೆಯ ಪ್ರಕಾರ, ಶೇಕಡಾ 54 ರಷ್ಟು ಜನರು ಆದಿತ್ಯನಾಥ್ ಅವರ ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸಿದರೆ, 58 ಪ್ರತಿಶತದಷ್ಟು ಜನರು ಅಂತರ್ ಧರ್ಮದ ವಿರುದ್ಧದ ಕಾನೂನುಗಳ ವಿರುದ್ಧ ಮತ ಚಲಾಯಿಸಿದ್ದಾರೆ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದು ಯೋಗಿ ಆದಿತ್ಯನಾಥ್ ಸಿಎಂ ಆಗಿ ಆಯ್ಕೆಯಾಗಿದ್ದರು, ಇನ್ನು ಸಮೀಕ್ಷೆಯ ಪ್ರಕಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶೇ 14 ರಷ್ಟು ಮತಗಳನ್ನು ಗಳಿಸುವ ಮೂಲಕ ಎರಡನೇ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ 6 ಶೇಕಡಾ ಮತಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ, ನಂತರ ಜಗನ್ ಮೋಹನ್ ರೆಡ್ಡಿ ಐದನೇ ಸ್ಥಾನ ಪಡೆದಿದ್ದಾರೆ.

Edited By : Nirmala Aralikatti
PublicNext

PublicNext

25/01/2021 02:01 pm

Cinque Terre

76.19 K

Cinque Terre

9