ಬೆಂಗಳೂರು: ರಾಜ್ಯದ ಕಾಮಿಡಿ ಸರ್ಕಾರವನ್ನು ನೋಡಿ ಕೆಲವರು ನಗುತ್ತಿದ್ದರೆ ಮತ್ತೆ ಕೆಲವರು ಉಗಿಯುತ್ತಿದ್ದಾರೆ. ಮಾಡಬೇಕಾದ ಕೆಲಸ ಕಾರ್ಯಗಳನ್ನು ಬಿಟ್ಟು ಹೀಗೆ ಸಚಿವ ಸ್ಥಾನ ಅದಲು ಬದಲು ಮಾಡುವುದರಲ್ಲಿ ತಲ್ಲೀನರಾದ ಸಿಎಂ ವಿರುದ್ಧ ಜನ ಗರಂ ಆಗಿದ್ದಾರೆ.
ಇದರ ನಡುವೆ ಖಾತೆ ಅದಲು-ಬದಲಿಗೆ ಕೆಂಡಾಮಂಡಲವಾಗಿರುವ ಸಚಿವ ಮಾಧುಸ್ವಾಮಿ, ನಾಳೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ನಾಳೆ(ಜ.26) ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಸ್ಥಾನಕ್ಕೆ ನಾನು ರಾಜಿನಾಮೆ ನೀಡುವೆ. ಅದನ್ನು ಅಂಗೀಕರಿಸಿ ಸರ್ ಎಂದು ಮುಖ್ಯಮಂತ್ರಿಗೆ ಮಾಧುಸ್ವಾಮಿ ಹೇಳಿದ್ದಾರೆ. ದೂರವಾಣಿ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರು ಮಾಧುಸ್ವಾಮಿ ಕೇಳುತ್ತಿಲ್ಲ.
3 ನೇ ಬಾರಿ ಸಚಿವ ಸ್ಥಾನ ಅದಲು ಬದಲು ಕಾರ್ಯಕ್ಕೆ ಮಾಧುಸ್ವಾಮಿ ಗರಂ ಆಗಿದ್ದಾರೆ. ಡಾ.ಕೆ.ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ಕೊಟ್ಟಿದ್ದ ಸಿಎಂ, ಇದೀಗ ಮತ್ತೆ ಆ ಖಾತೆಯನ್ನು ಸುಧಾಕರ್ ಗೆ ಕೊಡಲು ನಿರ್ಧರಿಸಿದ್ದಾರೆ.
ಮಾಧುಸ್ವಾಮಿಗೆ ಇಂದು ಸಂಜೆಯೊಳಗೆ ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಲು ಸಿಎಂ ಸಜ್ಜಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
PublicNext
25/01/2021 01:51 pm