ಬೀದರ್: 'ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ಅವರು ಹಿಂದೊಮ್ಮೆ ಅಮೆರಿಕಕ್ಕೆ ಬಂದಿದ್ದರು. ಆಗ ನಾನೇ ಅವರನ್ನು ಜೋ ಬೈಡನ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಹೇಳಿದ್ದಾರೆ.
ಬೀದರ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಅಚ್ಚರಿಯ ಹೇಳಿಕೆ ‘ ನಾನು ಇನ್ಮುಂದೆ ನನ್ನ ಕ್ಷೇತ್ರದಲ್ಲೇ ಇರುತ್ತೇನೆ. ಪತ್ನಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಮಕ್ಕಳು ಅಮೆರಿಕದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಹಿಂದೆ ಜೆ.ಎಚ್.ಪಟೇಲ್ ಅವರು ಅಮೆರಿಕಕ್ಕೆ ಬಂದಾಗ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ. ನಾನು ಇನ್ನು ಬೀದರ್ ಜಿಲ್ಲೆಯಲ್ಲಿಯೇ ಉಳಿಯುವೆ’ ಎಂದು ಅವರು ತಿಳಿಸಿದರು.
PublicNext
24/01/2021 06:00 pm