ಬಳ್ಳಾರಿ: ಅಂತಿಂಥವರ ಸಂಪುಟದಲ್ಲಿ ಸಚಿವನಾಗುವ ಗಿರಾಕಿ ನಾನಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವನಾಗಿದ್ದ ನಾನು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜನಜಾಗೃತ ಸಮಾವೇಶದಲ್ಲಿ ಮಾತನಾಡಿದ ಅವರು, ''ರಾಜ್ಯ ಸರಕಾರ ನನಗೆ ಒದಗಿಸಿದ ಪೊಲೀಸ್ ಭದ್ರತೆ ಹಿಂಪಡೆದಿದೆ. ಜೊತೆಗೆ ಗುಪ್ತಚರರನ್ನು ನನ್ನ ಹಿಂದೆ ಬಿಟ್ಟಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ನನ್ನ ಎಲ್ಲಾ ಆಸ್ತಿಯೂ ಸಕ್ರಮವಾಗಿದೆ. ಹೀಗಾಗಿ ನನ್ನ ವಿರುದ್ಧ ಮಸಲತ್ತು ನಡೆಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ'' ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಗುಡುಗಿದರು.
ಮಂತ್ರಿಮಂಡಲದ ವಿಸ್ತರಣೆ ಮಾಡಲು ಯುವರಾಜ್‍ನನ್ನು ಬಳಕೆ ಮಾಡಿಕೊಂಡು. ಆದರೆ ಈಗ ಆತನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
PublicNext
24/01/2021 07:26 am