ಚಿತ್ರದುರ್ಗ: ಕಾಗಿನೆಲೆ ಗುರುಪೀಠದ ಪ್ರಥಮ ಪಟ್ಟಾಧಿಕಾರಿಯೇ ಆರ್‍ಎಸ್‍ಎಸ್‌ನವರು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಕುರುಬ ಸಮುದಾಯದ ಪಾದಾಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಗಿನೆಲೆ ಮಹಾ ಸಂಸ್ಥಾನದ ಸ್ಥಾಪಕ ಅಧ್ಯಕ್ಷ ನಾನಾಗಿದ್ದೂ, ನಂಜನಗೂಡು ಮೂಲದ ಬಿರೇಂದ್ರಕೇಶವ ತಾರಕಾನಂದಪುರಿ ಸ್ವಾಮಿಗಳು ಮೊದಲ ಪೀಠಾಧಿಪತಿಯಾಗಿದ್ದಾರೆ. ಅವರು ಆರ್‌ಎಸ್‌ಎಸ್‌ನವರು. ದೇಶದಲ್ಲಿ ಆರ್‍ಎಸ್‍ಎಸ್ ಸಂಸ್ಥೆಗೆ ಬಹಿಷ್ಕಾರ ಹಾಕಿಲ್ಲ. ಹೀಗಾಗಿ ನಮ್ಮ ಹೋರಾಟಕ್ಕೆ ಆರ್‍ಎಸ್‍ಎಸ್‌ನ ಸಹಕಾರ ನೀಡಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕುರುಬರ ಹೋರಾಟಕ್ಕೆ ಆರ್‍ಎಸ್‍ಎಸ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಬೆಂಬಲ ನೀಡಿದರೆ ಪಡೆಯುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
PublicNext
23/01/2021 08:59 pm