ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌಮ್ಯ ರೆಡ್ಡಿ ವಿರುದ್ಧ FIR, ಪೊಲೀಸರ ನಡೆಗೆ ಡಿಕೆ ಶಿ ಕಿಡಿ

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಆರೋಪದಲ್ಲಿ ಸೌಮ್ಯ ರೆಡ್ಡಿ ವಿರುದ್ಧ ಎಫ್ ಐಆರ್ ದಾಖಲಾಗಿರುವುದಕ್ಕೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ರಾಜಭವನ ಚಲೋ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಶಾಸಕಿ ವಿರುದ್ಧ ಎಫ್ ಐಆರ್ ದಾಖಲು ಮಾಡಿದ ಪೊಲೀಸರ ಕ್ರಮ ಸರಿಯಲ್ಲ ಎಂದು ಡಿಕೆ ಶಿ ಗರಂ ಆಗಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಪೊಲೀಸರ ಹೇಗೆ ವರ್ತಿಸಿದರು ಎಂಬುವುದನ್ನು ನಾನೇ ಸ್ವತಃ ಕಣ್ಣಾರೆ ನೋಡಿದ್ದೇನೆ. ಪೊಲೀಸರು ಬೇಕಂತ ಎಳೆದು ಗಾಡಿಗೆ ಹತ್ತಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅವರು ಸಣ್ಣ ಏಟು ಹೊಡೆದಿದ್ದಾರೆ.

ಆದರೆ ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ವ್ಯವಸ್ಥಿತರಾಗಿ ದೌರ್ಜನ್ಯ ಎಸಗಿದ್ದಾರೆ. ಬಿಜೆಪಿ ಶಾಸಕರು ಈ ಹಿಂದೆ ಬಾಯಿಗೆ ಬಂದ ಹಾಗೆ ಹೇಳಿಕೆ ಕೊಟ್ಟಾಗ ಏಕೆ ಕ್ರಮ ಇಲ್ಲ. ಪೊಲೀಸ್ ಅಧಿಕಾರಿಗಳು ಹೇಡಿಗಳ ತರ ವರ್ತನೆ ಮಾಡಿದ್ದೀರಿ. ಪೊಲೀಸರುಗೆ ಇರುವ ಗೌರವ ಹಾಳು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

Edited By : Nirmala Aralikatti
PublicNext

PublicNext

23/01/2021 01:55 pm

Cinque Terre

46.87 K

Cinque Terre

2

ಸಂಬಂಧಿತ ಸುದ್ದಿ