ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್ ಪಡೆದ ನಂತರ ಮೌನಕ್ಕೆ ಶರಣಾಗಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಕೊನೆಗೂ ಮಾತಾಡಿದ್ದಾರೆ. ರಾಜಕೀಯ ಸೂಸೈಡ್ ಪರಿಸ್ಥಿತಿಯಲ್ಲಿ ಗೆದ್ದು ಬಂದಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇ ಮೂರರಷ್ಟು ಮತ ಪಡೆದಿರಲಿಲ್ಲ. ಹೀಗಿರುವಾಗ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೀನಿ ಅನ್ನೋದು ಗೊತ್ತಿದೆ ಎಂದು ವಲಸಿಗ ಸಚಿವರ ಖಾತೆ ಬದಲಾವಣೆ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡು ಖಾತೆ ಯಾರಿಗೆ ಬೇಕಾದರೂ ಕೊಡಲಿ. ಆದರೆ, ಒಬ್ಬರಿಗೆ ಕೊಡಿ ಅನ್ನೋದು ನನ್ನ ಮನವಿ. ವೈದ್ಯಕೀಯ ಶಿಕ್ಷಣ ಒಂದು ವಿಶೇಷ ಸಬ್ಜೆಕ್ಟ್. ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆ ಒಂದಕ್ಕೊಂದು ಪೂರಕವಾದುದು. ಈಗ ಖಾತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ ಸಾಧ್ಯತೆ ಇದೆ. ನನ್ನ ಅಸಮಾಧಾನ ಮುಖ್ಯವಲ್ಲ, ಈ ನಿರ್ಧಾರ ಲಸಿಕೆ ಹಂಚಿಕೆಗೆ ಗೊಂದಲ ಉಂಟಾಗಬಾರದು ಅನ್ನೋದಷ್ಟೇ ನನ್ನ ಉದ್ದೇಶ ಎಂದರು.
PublicNext
22/01/2021 05:27 pm