ಬೆಂಗಳೂರು: ರಾಜ್ಯ ರಾಜಕಾರಣ ನೋಡಿದರೆ ಸಣ್ಣ ಮಕ್ಕಳಿಗೂ ನಗು ಬರತ್ತೇ ಆಡೋನ ಬಾ ಕೆಡಸೋನ ಬಾ ಎನ್ನುವಂತಿದೆ ರಾಜ್ಯದ ರಾಜಕಾರಣ
ಹೌದು ಇತ್ತೀಚೆಗಷ್ಟೇ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲಾಗಿತ್ತು ಅದರಿಂದ ಅಸಮಾಧಾನಕ್ಕೆ ತೆರೆ ಎಳೆಯಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದರು.
ಆದರೆ ಸಿಕ್ಕ ಖಾತೆಗೆ ಸಮಾಧಾನಗೊಳ್ಳದ ಸಚಿವರು ಮತ್ತೆ ಮೊಂಡಾಟ ಮುಂದುವರೆಸಿದ್ದಾರೆ ನನಗೆ ಅದು ಬೇಡ ಅದು ಬೇಕು ಎನ್ನುತ್ತಿದ್ದಾರೆ.ಸಚಿವರ ಸಮಾಧಾನ ಕಂಡ ಸಿಎಂ ನಾಲ್ಕು ಮಂದಿ ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಿದ್ದಾರೆ.
ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ, ಎಂಟಿಬಿ ನಾಗರಾಜ್ ಗೆ ಪೌರಾಡಳಿತ, ಸಕ್ಕರೆ ಖಾತೆ, ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆ ಮತ್ತು ಡಾ.ಕೆ.ಸಿ.ನಾರಾಯಣ ಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ. ಎಂಟಿಬಿ ನಾಗರಾಜ್ ಅವರು ವಸತಿ ಖಾತೆಗಾಗಿ ಮನವಿ ಮಾಡಿದ್ದರು ಎನ್ನಲಾಗಿತ್ತು.
PublicNext
22/01/2021 12:30 pm