ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ದೇಶದ 3,500 ಮಸೀದಿಗಳು ನೆಲಸಮ: ಅಜ್ಮಲ್

ಗುವಾಹಟಿ: ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 3,500 ಮಸೀದಿಗಳನ್ನು ನೆಲಸಮ ಮಾಡಲಿದೆ ಎಂದು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್) ಮುಖ್ಯಸ್ಥ, ಅಸ್ಸಾಂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

ತಮ್ಮ ಧುಬ್ರಿ ಕ್ಷೇತ್ರದ ಗೌರಿಪುರದಲ್ಲಿ ಬುಧವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕುರಾನ್ ತ್ರಿವಳಿ ತಲಾಖ್‌ಗೆ ಅವಕಾಶ ನೀಡುತ್ತದೆ ಮತ್ತು ಇದು ಅಲ್ಲಾಹನ ಮಾತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅದನ್ನು ನಾಶಪಡಿಸಿತು. ಬಾಬರಿ ಮಸೀದಿಯನ್ನು ಬಿಜೆಪಿ ನೆಲಸಮ ಮಾಡುತ್ತಿದೆ. ನಿಮ್ಮ ಪ್ರದೇಶದ ವಿವಿಧ ಮಸೀದಿಗಳು ಬಿಜೆಪಿ ರೇಡಾರ್‌ನಲ್ಲಿವೆ. ಒಟ್ಟಾರೆಯಾಗಿ ಭಾರತದಲ್ಲಿರುವ 3,500 ಮಸೀದಿಗಳು ಬಿಜೆಪಿ ಪಟ್ಟಿಯಲ್ಲಿವೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿದರೆ ಅವುಗಳು ನೆಲಸಮವಾಗುತ್ತವೆ ಎಂದು ದೂರಿದ್ದಾರೆ.

ಅಸ್ಸಾಂನಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಂಡರೂ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಹಿಳೆಯರಿಗೆ ಬುರ್ಖಾ ಧರಿಸಲು ಸಾಧ್ಯವಾಗುವುದಿಲ್ಲ, ಗಡ್ಡ ಬಿಟ್ಟು, ಟೋಪಿ ಧರಿಸಿದವರು ತಮ್ಮ ಮನೆಗಳಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ನೀವೆಲ್ಲರೂ ಮಸೀದಿಗಳಲ್ಲಿ ಅಜಾನ್ ನೀಡಲು ಸಹ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

21/01/2021 04:50 pm

Cinque Terre

70.74 K

Cinque Terre

19

ಸಂಬಂಧಿತ ಸುದ್ದಿ