ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೊಂದು ರೂಪದಲ್ಲಿ ಮತ್ತೆ ಬರುತ್ತೇನೆಂದು ವಿದಾಯ ಹೇಳಿದ ಟ್ರಂಪ್

ವಾಷಿಂಗ್ಟನ್: ಯಾವುದಾದರೊಂದು ಸ್ವರೂಪದಲ್ಲಿ ಮತ್ತೆ ನಿಮ್ಮ ಮುಂದೆ ಬಂದೇ ಬರುತ್ತೇನೆ ಎಂದು ತಮ್ಮ ಬೆಂಬಲಿಗರಿಗೆ ಡೊನಾಲ್ಡ್ ಟ್ರಂಪ್ ಹೇಳಿದರು. ಅಧಿಕೃತವಾಗಿ ಶ್ವೇತಭವನ ತೊರೆದಿರುವ ಅವರು, ತಮ್ಮ ಕೊನೆಯ ಭಾಷಣದಲ್ಲಿ ಭಾವುಕರಾದರು. ನಾನು ಯಾವಾಗಲೂ ಅಮೆರಿಕನ್ನರ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರುತ್ತೇನೆ.

ನಿಮ್ಮ ಧ್ವನಿಯನ್ನು ನಾನು ಯಾವಾಗಲೂ ಆಲಿಸುತ್ತೇನೆ ಎಂದು ಹೇಳಿದರು. ಕಳೆದ ನಾಲ್ಕು ವರ್ಷಗಳ ಅವಧಿ ಅಮೆರಿಕದ ಇತಿಹಾಸದ ಸುವರ್ಣ ಅವಧಿ ಎಂದು ಬಣ್ಣಿಸಿದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ನನಗೆ ಬೆಂಬಲ ನೀಡಿದ ರಿಪಬ್ಲಿಕನ್ ಪಕ್ಷ ಹಾಗೂ ಅಮೆರಿಕನ್ ಜನತೆಗೆ ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

Edited By : Nagaraj Tulugeri
PublicNext

PublicNext

21/01/2021 01:35 pm

Cinque Terre

94.76 K

Cinque Terre

5