ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಪೇದೆ ಮೇಲೆ ಕೈ ಮಾಡಿದ ಶಾಸಕಿ : ನಡೆದ ಘಟನೆ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಬೆಂಗಳೂರಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ಕೈ ಮಾಡುವ ಮೂಲಕ ಸೌಮ್ಯರೆಡ್ಡಿ ದಬ್ಬಾಳಿಕೆ ನಡೆಸಿದ್ದರು.

ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಶಾಸಕಿಯ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ಪ್ರತಿಭಟನೆ ವೇಳೆ ತಳ್ಳಾಟ ಆಗುತ್ತೆ. ಆದರೆ ಈ ಬಾರಿ ತುಂಬಾ ಅಗ್ರೇಸ್ಸಿವ್ ಆಗಿ ವರ್ತಿಸಿದ್ರು. ನನ್ನನ್ನು ಎಲ್ಲಾ ಕಡೆ ಮುಟ್ಟಲು ಬಂದಾಗ ಆ ಸಂದರ್ಭದಲ್ಲಿ ಆ ರೀತಿ ವರ್ತಿಸಬೇಕಾಯ್ತು. ಪೊಲೀಸರು ನಮ್ಮನ್ನು ಕ್ರಿಮಿನಲ್ ತರ ನೋಡಿದ್ರು. ನಾನು ಯಾರಿಗೂ ಹೊಡೆಯಲು ಹೋಗಿಲ್ಲ ಎಂದರು.

ಪ್ರತಿಭಟನೆ ಮುಗಿದ ಬಳಿಕ ರಾಜಭವನದತ್ತ ಮಹಿಳಾ ಶಾಸಕರೆಲ್ಲರೂ ಮೆರವಣಿಗೆ ಹೋಗ್ತಿದ್ವಿ. ಈ ವೇಳೆ ಪೊಲೀಸರು ನಮ್ಮನ್ನು ತಳ್ಳಿದ್ರು, ಕೂದಲು ಎಳೆದ್ರು. ನನ್ನನ್ನು ಎಲ್ಲಾ ಕಡೆ ಮುಟ್ಟಲು ಬಂದ್ರು, ಆಗ ನನಗೆ ತಲೆ ಸುತ್ತು ಬಂದಿತ್ತು. ಇಪ್ಪತ್ತು ಜನ ನನ್ನ ಎಲ್ಲಾ ಕಡೆ ಎಳೆದಾಡಿದ್ರು, ಈ ವೇಳೆ ನನಗೆ ಹೇಗಾಗಿರಬೇಕು?… ಹೀಗಂತ ಹೇಳಿದ್ದು ಜಯನಗರ ಶಾಸಕಿ ಸೌಮ್ಯರೆಡ್ಡಿ.

ಮೆರವಣಿಗೆ ಹೊರಟ ನಮ್ಮನ್ನು ಪೊಲೀಸರೇ ಒತ್ತಾಯ ಪೂರ್ವಕವಾಗಿ ನಮ್ಮನ್ನು ಮುಟ್ಟಿ, ಗಾಡಿಗೆ ಹತ್ತಿಸಲು ಮುಂದಾದ್ರು. ನಾನು ಊಟ ಮಾಡಿರಲಿಲ್ಲ, ಆ ವೇಳೆ ತಲೆ ಸುತ್ತು ಬಂತು. ಯಾರೇ ಆಗಲಿ ಆ ರೀತಿ ವರ್ತಿಸಿದ್ರೆ ಏನು ಮಾಡ್ತಾರೆ? ಎಂದ ಶಾಸಕಿ, ಆದರೂ ಆ ವೇಳೆಯ ನನ್ನ ಪ್ರತಿಕ್ರಿಯೆಯಿಂದ(ಹೂ ದಿ ಹೆಲ್ ಎಂಬ ಮಾತಿಗೆ) ಯಾರಿಗಾದರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದರು.

Edited By : Nirmala Aralikatti
PublicNext

PublicNext

21/01/2021 01:05 pm

Cinque Terre

55.68 K

Cinque Terre

6