ಬೆಂಗಳೂರು: ರಾಜ್ಯದ ಸಿಎಂ ಆಗಿ ಬಿ. ಎಸ್ ಯಡಿಯೂಪ್ಪ ಅಧಿಕಾರ ವಹಿಸಿಕೊಂಡಾಗಿನಿಂದ ಪುತ್ರ ವಿಜಯೇಂದ್ರ ಅವರು ಸರ್ಕಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಕೆಲವು ಶಾಸಕರು ಈ ಹಿಂದೆಯೇ ಆರೋಪಿಸಿದ್ದರು. ಈಗ ನೂತುನ ಮಂತ್ರಿಗಳಿಗೆ ರಾತ್ರೋರಾತ್ರಿ ಖಾತೆಗಳ ಪುನರ್ ಹಂಚಿಕೆಯನ್ನ ಬಿ.ವೈ. ವಿಜಯೇಂದ್ರ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಸರ್ಕಾರದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪದ ಬಗ್ಗೆ ಕೋರ್ ಕಮಿಟಿ ಸದಸ್ಯರೇ ದೂರು ನೀಡಿದ್ದರು. ದೂರು ಪಡೆದ ನಂತರ ಸಿಎಂ ಜೊತೆ ಮಾತಾಡಿದ್ದ ಅಮಿತ್ ಶಾ, ಆಡಳಿತದಿಂದ ಪುತ್ರ ಹಾಗೂ ಕುಟುಂಬವನ್ನು ದೂರ ಇಡಿ ಎಂದು ಸಲಹೆ ನೀಡಿದ್ದರು ಎಂಬ ಮಾಹಿತಿ ಇದೆ. ಆದ್ರೆ ಇದೀಗ ವಿಜಯೇಂದ್ರ ನಿರ್ಧಾರದಂತೆಯೇ ಖಾತೆಗಳ ಪುನರ್ ಹಂಚಿಕೆ ಆಗಿದೆ ಎಂಬ ಮಾತುಗಳು ಕೇಸರಿ ಮನೆಯಲ್ಲಿ ಕೇಳಿ ಬರುತ್ತಿವೆ.
ರಾತ್ರಿ ರಾಜಭವನಕ್ಕೆ ಪಟ್ಟಿ ರವಾನೆ ಆಗಿರೋ ವಿಷಯ ಲೀಕ್ ಆಗ್ತಿದ್ದಂತೆ ಪ್ರಮುಖ ಖಾತೆ ಕಳೆದುಕೊಂಡ ಸಚಿವರು ವಿಜಯೇಂದ್ರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಅಂಕಿತಕ್ಕೂ ಮುನ್ನ ತಮ್ಮ ಖಾತೆಗಳನ್ನ ಉಳಿಸಿಕೊಳ್ಳಲು ಸಚಿವರು ಕೊನೆಯ ಪ್ರಯತ್ನದಲ್ಲಿದ್ದಾರೆ. ಆದ್ರೆ ವಿಜಯೇಂದ್ರ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
PublicNext
21/01/2021 01:03 pm