ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರ್ಯಾಗನ್ ಹಣ್ಣಿಗೆ 'ಕಮಲಂ' ಎಂದು ಮರುನಾಮಕರಣ

ಗಾಂಧಿನಗರ: ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ.

ಗುಜರಾತ್‌ನ ಕಚ್ ಜಿಲ್ಲೆಯ ರೈತರು ಡ್ರ್ಯಾಗನ್ ಹಣ್ಣಿನ ಹೆಸರನ್ನು ಮರುನಾಮಕರಣ ಮಾಡುವಂತೆ ಸರ್ಕಾರವನ್ನು ಕೋರಿದ್ದರು. ಈ ಬಗ್ಗೆ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರತಿಕ್ರಿಯೆ ನೀಡಿದ್ದು, "ಡ್ರ್ಯಾಗನ್" ಎಂಬ ಪದವು ಆಕರ್ಷಕವಾಗಿಲ್ಲ ಮತ್ತು ಜನರು ಇದನ್ನು ಚೀನಾದ ಹಣ್ಣು ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲದೆ ಹಣ್ಣಿನ ಹೊರ ಆಕಾರವು ಕಮಲವನ್ನು ಹೋಲುತ್ತದೆ. ಹೀಗಾಗಿ ಕಮಲಂ ಎಂದು ಮರುನಾಮಕರಣ ಮಾಡಲು ನಿರ್ದರಿಸಲಾಗಿದೆ. ಕಮಲಂ ಅಂದರೆ ಸಂಸ್ಕೃತದಲ್ಲಿ ಕಮಲ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

20/01/2021 09:51 am

Cinque Terre

56.45 K

Cinque Terre

5

ಸಂಬಂಧಿತ ಸುದ್ದಿ