ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಡನ್ ಪದಗ್ರಹಣ: 100 ಅಪರಾಧಿಗಳಿಗೆ ಟ್ರಂಪ್ ಕ್ಷಮಾದಾನ

ವಾಷಿಂಗ್ಟನ್: ತಮ್ಮ ವಿಶಿಷ್ಟ ನಡಾವಳಿಗಳ ಮೂಲಕ ವಿಶ್ವದ ಗಮನ ಸೆಳೆದಿದ್ದ ಟ್ರಂಪ್ ಅವರ ಅಮರಿಕ ಅಧ್ಯಕ್ಷ ಅವಧಿ ಇಂದಿಗೆ ಮುಕ್ತಾಯವಾಗಿದೆ. ನಾಳೆ ಮದ್ಯಾಹ್ನ ನೂತನ ಅಧ್ಯಕ್ಷ ಜೋ ಬೈಡನ್ ಬೈಡನ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನವೇ ಟ್ರಂಪ್ ವಾಷಿಂಗ್ಟನ್ ಡಿಸಿಗೆ ವಿದಾಯ ಹೇಳಲಿದ್ದಾರೆ.

ವಿದಾಯ ಕೂಟದಲ್ಲಿ ಭಾಗವಹಿಸುವ ಮುನ್ನ ಕೊನೆಯದಾಗಿ ತಮ್ಮ ಅಧಿಕಾರ ಬಳಸಿಕೊಂಡು 100 ಅಪರಾಧಿಗಳಿಗೆ ಕ್ಷಮಾದಾನ ನೀಡಲಿದ್ದಾರೆ. ಇದರಲ್ಲಿ ಹೈ ಪ್ರೊಫೈಲ್ ಕ್ರಿಮಿನಲ್ ಗಳು ಕೂಡ ಇದ್ದಾರೆ.

ಇನ್ನು ಬೈಡೆನ್ ಪದಗ್ರಹಣ ಸಂದರ್ಭದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ಪ್ರತಿಭಟನಾಕಾರರು ನುಗ್ಗುವ ಸುಳಿವು ಇದೆ.

Edited By : Nagaraj Tulugeri
PublicNext

PublicNext

19/01/2021 02:14 pm

Cinque Terre

62.86 K

Cinque Terre

1

ಸಂಬಂಧಿತ ಸುದ್ದಿ