ಹಾವೇರಿ: ಬಿಜೆಪಿಗೆ ಬಂದ ವಲಸೆ ಶಾಸಕರು ಬಿಜೆಪಿಯಲ್ಲಿರಬಹುದು ಅಥವಾ ಬೇರೆ ಕಡೆಗೆ ಹೋಗಬಹುದು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಈಗ ಮೋದಿ ಹವಾ ಇದೆ. ಮುಂದೆ ಮೋದಿ ಹವಾ ಕಡಿಮೆಯಾದ್ರೆ ಸೋನಿಯಾ ಗಾಂಧಿಗೆ ಜೈ ಎನ್ನಬಹುದು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸದ ವೇಳೆ ಇನ್ನೂ ಮುಂದಿನ ಎರಡೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂದು ಹೇಳಿದ್ದರು. ಆದರೆ, ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದು ಹೇಳಿಲ್ಲ ಎಂದರು. ಈ ಮೂಲಕ ಶೀಘ್ರವೇ ಬಿಎಸ್ವೈ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎನ್ನುವ ಸೂಚನೆ ನೀಡಿದರು.
PublicNext
19/01/2021 12:14 pm