ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪಿಸುವೆ: ಡಿಕೆಶಿ

ಕಲಬುರಗಿ: ಬಿಜೆಪಿ ಶಾಸಕರೇ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿಚಾರ ಅಧಿವೇಶನದಲ್ಲಿ ಚರ್ಚಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ವಿಭಾಗೀಯ ಸಂಕಲ್ಪ ಸಮಾವೇಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ಬೈ ಸಿಡಿಯ ಬಗ್ಗೆ ಅನೇಕ ವಿಚಾರ ನನಗೂ ಗೊತ್ತು. ಹೀಗಾಗಿ ಅದನ್ನೆಲ್ಲಾ ಅಧಿವೇಶನ ಸಂದರ್ಭದಲ್ಲಿ ನೋಡೋಣ ಎಂದು ತಿಳಿಸಿದರು.

ಇದೇ ವೇಳೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಡಬಲ್ ಇಂಜಿನ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ''ಮಹಾದಾಯಿ ವಿಚಾರದಲ್ಲಿ ಈ ಡಬಲ್ ಇಂಜಿನ್ ಏನು ಮಾಡಿದೆ? ಉತ್ತರ ಕರ್ನಾಟಕಕ್ಕೆ ಈ ಸರ್ಕಾರದಲ್ಲಿ ಅನ್ಯಾಯವಾಗಿದೆ ಎನ್ನುವ ಭಾವನೆ ಇದೆ. ಕಲ್ಯಾಣ ಕರ್ನಾಟಕ ಜನ ಸಹ ತೀವ್ರ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಹಾಗಾದರೆ ಈ ಡಬಲ್ ಇಂಜಿನ್ ಸಾಧನೆ ಏನು'' ಎಂದು ಪ್ರಶ್ನಿಸಿದರು.

Edited By : Vijay Kumar
PublicNext

PublicNext

18/01/2021 02:48 pm

Cinque Terre

30.93 K

Cinque Terre

4

ಸಂಬಂಧಿತ ಸುದ್ದಿ