ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು. ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಬಿಎಸ್‌ವೈ ಸಿಡಿ ಬ್ಲಾಕ್‌ಮೇಲ್ ವಿಚಾರವಾಗಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸಿಎಂ ಯಡಿಯೂರಪ್ಪ ಸಿಡಿಯಲ್ಲಿ ಏನ್ ಇದೆ ಎನ್ನುವುದು ಬಹಿರಂಗವಾಗಲಿ. ಈ ಕುರಿತಾಗಿ ಜನತೆಗೆ ತಿಳಿಯಬೇಕು. ಈ ಬಗ್ಗೆರ ತನಿಖೆಯಾಗಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಅವರು, ''ಏಪ್ರಿಲ್ ಬಳಿಕ ಯಡಿಯೂರಪ್ಪ ಅವರನ್ನು ತೆಗೆಯುತ್ತಾರೆ ಎಂದು ನನಗೆ ಆರ್‌ಎಸ್ಎಸ್ ಮೂಲಗಳಿಂದ ಮಾಹಿತಿ ಬಂದಿದೆ. ಹೈಕಮಾಂಡ್ ಬಿಎಸ್‍ವೈನ ತೆಗೆಯುತ್ತೇನೆ ಎಂದು ಹೇಳಿದರೆ ಸರ್ಕಾರ ನಡೆವುದಕ್ಕೆ ಆಗುತ್ತಾ? ಕೆಲಸ ಮಾಡುವುದಕ್ಕೆ ಆಗುತ್ತಾ? ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಆದ ಮೇಲೆ ತೆಗೆಯುತ್ತಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಕ್ಯಾಬಿನೆಟ್ ಸಚಿವರೇ 9 ಕೋಟಿ ರೂ. ಖರ್ಚು ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿ.ಬಿ. ಯೋಗೇಶ್ವರ್ ಆ ದುಡ್ಡು ಎಲ್ಲಿಂದ ತಂದಿದ್ದಾರೆ. ಯಾರ ಬಳಿ ಸಾಲ ಮಾಡಿದ್ದಾರೆ. ಹಣವನ್ನು ಯಾರಿಗೆ ನೀಡಿದ್ದಾರೆ ಎನ್ನುವುದು ತನಿಖೆಯಾಗಲಿ ಎಂದು ಆಗ್ರಹಿಸಿದರು.
PublicNext
17/01/2021 02:15 pm