ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದ್ರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದ್ರೆ ಸಿಡಿ ಇದೆ ಅಂತ ಹೆದರಿಸಿವದು ಸರಿಯಲ್ಲ. ಸಿಎಂ ಅವರೇ ಹೇಳಿದ್ದಾರೆ ಸಿಡಿ ಇದ್ರೆ ಕೊಡಿ ಅಂತ. ಅವರ ಬಳಿ ಸಿಡಿ ಇಲ್ಲ ಏನು ಇಲ್ಲ ಸುಮ್ನೆ ಹೆದರಿಸುತ್ತಿದ್ದಾರೆ. ಇದ್ರೆ ಬಿಡುಗಡೆ ಮಾಡಲಿ, ಇದು ಕೇವಲ ಹೆದರಿಸುವ ತಂತ್ರ. ನನ್ನ ಬಳಿ ಸಿಡಿ ಬಂದಿಲ್ಲ. ಬಂದ್ರೆ ನಾನು ಮೊದಲೇ ನಿಮ್ಮಗೆ ಕೊಡುತ್ತೇನೆ ಎಂದು ನಗೆಚಟಾಕಿ ಹಾರಿಸಿದರು.
PublicNext
15/01/2021 01:56 pm