ಬೆಳಗಾವಿ: ಕೊರೊನಾ ಮಾರ್ಗಸೂಚಿ ನಿಯಮಗಳು ಇನ್ನೂ ದೇಶದೆಲ್ಲೆಡೆ ಜಾರಿಯಲ್ಲಿವೆ. ಕೂಡ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಬೃಹತ್ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 17ರಂದು ನಡೆಯಲಿರುವ ರ‍್ಯಾಲಿಯಲ್ಲಿ ಸುಮಾರು 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಬಿಜೆಪಿಯ ಜನಸೇವಾ ಸಮಾವೇಶ ನಡೆಯಲಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಗೆ ಮಾಹಿತಿ ನೀಡಿರುವ ಅವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸುಮಾರು 85 ಸಾವಿರ ವಾಹನ ಬರಲಿದೆ. ರ‍್ಯಾಲಿ ಹಾಗೂ ಸಮಾವೇಶ ಯಶಸ್ವಿಗೊಳಿಸಲು ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಎಲ್ಲರ ಸಹಕಾರ ದೊರೆತಿದೆ ಎಂದರು.
PublicNext
15/01/2021 08:49 am