ನವದೆಹಲಿ: ಕೊರೊನಾ ಕಾರಣದಿಂದಾಗಿ ಈ ಬಾರಿ ಜನವರಿ 26ರಂದು ಗಣರಾಜ್ಯೋತ್ಸವದಂದು ಯಾವುದೇ ವಿದೇಶಿ ಗಣ್ಯ ಅಥಿತಿಯನ್ನು ಆಹ್ವಾನಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಮೊದಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಇಂಗ್ಲೆಡ್ನಲ್ಲಿ ರೂಪಾಂತಾರಿ ಕೊರೊನಾ ಹಾವಳಿ ಹೆಚ್ಚಿರುವ ಹಿನ್ನೆಲೆ ಅವರು ಈ ಪ್ರವಾಸವನ್ನು ರದ್ದು ಮಾಡಿದರು. ಬೋರಿಸ್ ಜಾನ್ಸ್ ಪ್ರವಾಸ ರದ್ದಾದ ಬಳಿಕ ಸುರಿನಾಮ್ ಅಧ್ಯಕ್ಷ ಚಂದ್ರಕಾಪರ್ಸಾದ್ ಸಂತೋಳಿ ಅವರನ್ನು ಆಹ್ವಾನಿಸಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಪಡಿಸಿರಲಿಲ್ಲ.
ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಎಲ್ಲೆಡೆ ಕೊರೊನಾ ವೈರಸ್ ಸೋಂಕಿರುವುದರಿಂದ ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಗಳನ್ನು ಕರೆಯದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 1966ರಲ್ಲಿ ಜನವರಿ 24ರಂದು ಇಂದಿರಾ ಗಾಂಧಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಹಾಗೂ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರ ನಿಧನರಾದ ಎರಡು ವರ್ಷ ಅಂದರೆ 1952 ಮತ್ತು 53ರಲ್ಲಿ ಕೂಡ ಅತಿಥಿಗಳು ಭಾಗಿಯಾಗಿರಲಿಲ್ಲ.
PublicNext
14/01/2021 09:46 pm