ಮಧುರೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡಿನ ಅವನಿಯಪುರಂನಲ್ಲಿ ‘ಜಲ್ಲಿಕಟ್ಟು’ ಕ್ರೀಡೆಯನ್ನು ಗುರುವಾರ ವೀಕ್ಷಿಸಿದರು. ಬಳಿಕ ಪೊಂಗಲ್ ಆಚರಣೆಯ ನಿಮಿತ್ತ ಮಧುರೈನಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಭೋಜನ ಸವಿದರು.
ರಾಹುಲ್ ಗಾಂಧಿ ಗುರುವಾರ ಪೊಂಗಲ್ ಹಬ್ಬದ (ಮಕರ ಸಂಕ್ರಾತಿ) ಆಚರಣೆಗಾಗಿ ದೆಹಲಿಯಿಂದ ತಮಿಳುನಾಡಿಗೆ ಬಂದಿದ್ದಾರೆ. ಪೊಂಗಲ್ ಹಬ್ಬದಂದು ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್, ಟಿಎನ್‌ಸಿಸಿ ಮುಖ್ಯಸ್ಥ ಕೆ.ಸಿ ಅಳಗಿರಿ, ಪುದುಚೇರಿ ಮುಖ್ಯಮಂತ್ರಿ ವಿ.ನಾರಯಣಸ್ವಾಮಿ ಅವರು ಭಾಗವಹಿಸಿದ್ದರು. ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕೂಡ ಜಲ್ಲಿಕಟ್ಟು ನಡೆಯುವ ಸ್ಥಳದಲ್ಲಿ ಉಪಸ್ಥಿತರಿದ್ದರು.
PublicNext
14/01/2021 05:20 pm