ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿನ್ನ ತಂದೆಗೆ ಅನ್ಯಾಯವಾಗಿದೆ, ನಿನಗೆ ಮಂತ್ರಿ ಸ್ಥಾನ ಕೊಡ್ತೀನಿ ಅಂತಾ ಸಿಎಂ ಹೇಳಿದ್ರು: ಶಾಸಕ ಬೆಲ್ಲದ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕೆ ನಿಷ್ಟರಾಗಿರುವ ಶಾಸಕರು ಹಾಗೂ ಯುವ ಶಾಸಕರಿಗೆ ಅನ್ಯಾಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು.

ರಾಜಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಿಮ್ಮ ತಂದೆಗೆ ಅನ್ಯಾಯವಾಗಿದೆ. ನಿನಗೆ ಮಂತ್ರಿ ಸ್ಥಾನ ಕೊಡ್ತೀನಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನಗೆ ಭರವಸೆ ನೀಡಿದ್ದರು. ವಿಧಾನ ಪರಿಷತ್ತಿನ ಐವರು ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಅಗತ್ಯ ಏನಿತ್ತು? ' ಎಂದು ಪ್ರಶ್ನಿಸಿದರು.

ಪಕ್ಷನಿಷ್ಠರು ಮತ್ತು ಕೆಲಸ ಮಾಡುವ ಅರ್ಹತೆ ಇರುವವರು ಹಾಗೂ ಯುವ ಶಾಸಕರಿಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತನಾಡುತ್ತೇನೆ' ಎಂದರು.

Edited By : Nagaraj Tulugeri
PublicNext

PublicNext

13/01/2021 06:12 pm

Cinque Terre

98.37 K

Cinque Terre

87

ಸಂಬಂಧಿತ ಸುದ್ದಿ