ಮೈಸೂರು: ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮ ಮನೆ ದೇವರು ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಿಂದ ನಾಗೇಶ್ ಅವರನ್ನು ಯಾಕೇ ತೆಗೆಯಬೇಕಿತ್ತು? ಮುನಿರತ್ನ ಬದಲು ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ಕೊಡ್ತೀರಾ ಹೇಳಿ? ಕೋರ್ಟ್ ಆದೇಶಕ್ಕೂ ನನಗೆ ಮಂತ್ರಿ ಸ್ಥಾನ ಕೊಡೋದಕ್ಕೂ ಸಂಬಂಧವೇ ಇಲ್ಲ. ಆ ಸೈನಿಕನ ಮೇಲೆ 420 ಕೇಸ್ಗಳಿವೆ. ಅವನಿಗೆ ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರಾ? ಯಾಕೇ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸಂಪುಟದ 33 ಸಚಿವರಲ್ಲಿ 13 ಮಂದಿ ವೀರಶೈವ, 11 ಜನ ಒಕ್ಕಲಿಗ ಹಾಗೂ 4 ಜನ ಕುರುಬರಿಗೆ ಮಂತ್ರಿ ಕೊಟ್ಟಿದ್ದೀರಾ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ. ಸಿ.ಪಿ.ಯೋಗೇಶ್ವರ್ ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ? ಅವನೇನು ರಾಜೀನಾಮೆ ಕೊಟ್ನಿದ್ನಾ ಎಂದು ಪ್ರಶ್ನಿಸಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
PublicNext
13/01/2021 03:37 pm