ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಮೇಲೆ ಶಾಸಕ ಸುನೀಲ್ ಕುಮಾರ್ ಅಸಮಾಧಾನ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರ ಪಟ್ಟಿ ಫೈನಲ್ ಆಗ್ತಾ ಇದ್ದಂತೆ ಇನ್ನೊಂದೆಡೆ ಅತೃಪ್ತರ ಪಟ್ಟಿ ಬೆಳೆಯುತ್ತಲೇ ಹೊರಟಿದೆ.

ಈ ನಡುವೆ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಸಿಎಂ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದುತ್ವವೇ ನನ್ನ ಅಜೆಂಡಾ. ಪಕ್ಷ ನಿಷ್ಟೆ, ಕ್ಷೇತ್ರದ ಅಭಿವೃದ್ಧಿ, ಬಿಟ್ರೆ ಬೇರೇನೂ ಗೊತ್ತಿಲ್ಲ. ಜಾತಿ ವೈಭವೀಕರಣ ಅರಿತಿಲ್ಲ‌. ಸ್ಥಾನಮಾನಕ್ಕಾಗಿ ನಾನು ಬ್ಲಾಕ್ ಮೇಲ್ ಮಾಡಿಲ್ಲ‌. ಇನ್ಮುಂದೆಯೂ ಈ ಮಾರ್ಗವನ್ನು ನಾನು ಹಿಡಿಯಲ್ಲ ಎಂದು ಬರೆದಿದ್ದಾರೆ. ಈ ಮೂಲಕ ಸಿ.ಪಿ ಯೋಗೀಶ್ವರ್ ಗೆ ಪರೋಕ್ಷವಾಗಿ ತಿವಿದಿದ್ದಾರೆ.

Edited By : Nagaraj Tulugeri
PublicNext

PublicNext

13/01/2021 03:23 pm

Cinque Terre

43.81 K

Cinque Terre

1

ಸಂಬಂಧಿತ ಸುದ್ದಿ