ಬೆಂಗಳೂರು: ಇದುವರೆಗೂ ಚಾತಕಪಕ್ಷಿಯಂತೆ ಕಾದಿರುವ ಸಚಿವರುಗಳಿಗೆ ಈ ದಿನ ಬಹು ಮುಖ್ಯವಾಗಿದೆ.
ಇಂದು ಸಂಜೆ 4ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 7 ರಿಂದ 8 ಜನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಯಾರೆಲ್ಲಾ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಸಿಎಂ ಗುಟ್ಟು ಬಿಟ್ಟುಕೊಟ್ಟಿಲ್ಲ.
ನೂತನ ಸಚಿವರಾಗಲಿರುವ ಶಾಸಕರಿಗೆ ಮುಖ್ಯಮಂತ್ರಿಗಳೇ ಖುದ್ದು ಕರೆ ಮಾಡಿ ಆಹ್ವಾನ ನೀಡುತ್ತಿದ್ದಾರೆ.
ಈ ಹಿನ್ನಲೆ ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವಾಕಾಂಕ್ಷಿಗಳಾದ ಸಿಪಿ ಯೋಗೀಶ್ವರ್, ಮುನಿರತ್ನ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ.
ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಸುಳ್ಯ ಶಾಸಕ ಅಂಗಾರ, ಉಮೇಶ್ ಕತ್ತಿ ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ.
ವಲಸಿಗರಲ್ಲಿ ಎಂಟಿಬಿ ನಾಗರಾಜ್, ಆರ್ ಶಂಕರ್ ಗೆ ಮಣೆಹಾಕುವ ಸಾಧ್ಯತೆ ಇದೆ.
ಇನ್ನು ಉಳಿದಿರುವ ಒಂದು ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ಇದಕ್ಕಾಗಿ ಮುನಿರತ್ನ ಮತ್ತು ಸಿ ಪಿ ಯೋಗಿಶ್ವರ್ ಪೈಪೋಟಿ ನಡೆಸಿದ್ದಾರೆ.
ಇಬ್ಬರಲ್ಲಿ ಯಾರಿಗೆ ಸಿಎಂ ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಮಾಹಿತಿ ನಿಗೂಢವಾಗಿದೆ. ಮುಖ್ಯಮಂತ್ರಿಗಳು ಇಬ್ಬರು ನಾಯಕರನ್ನು ಕರೆಸಿ ತನ್ನ ಕಾವೇರಿ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಇಬ್ಬರು ಕೂಡ ತಮಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
PublicNext
13/01/2021 10:25 am