ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವರದ್ದೇ ಪಕ್ಷದ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತೆ ಗುಡುಗಿದ್ದಾರೆ.
ಲಡಾಖ್‍ನಿಂದ ಚೀನಾದ ಪಡೆಗಳನ್ನು ವಿದೇಶಿ ಸಹಾಯವಿಲ್ಲದೆ ತೆರವುಗೊಳಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ''ಕುದುರೆಯನ್ನು ನೀರಿನ ಬಳಿ ಕರೆದೊಯ್ಯಬಹುದು ಆದರೆ ಅದು ನೀರು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
"1962ರ ಸೋಲು ನೆಹರೂ ಅವರ ಸೋಲು, ಭಾರತ ಮಾತೆಯ ಸೋಲಲ್ಲ ಎಂದು ತಿಳಿಯಬೇಕು. ಸುಮ್ಮನೆ ಹುಲ್ಲುಕಡ್ಡಿಗೆ ಜೋತು ಬೀಳದೆ ಗಟ್ಟಿಯಾಗಿ ನಿಲ್ಲಬೇಕು. ಅಂದರೆ ವಿದೇಶಿ ಸಹಾಯವಿಲ್ಲದೆ ನಾವು ಚೀನೀ ಸೈನ್ಯವನ್ನು ಲಡಾಖ್‍ನಿಂದ ಹೊರದಬ್ಬಬೇಕು" ಎಂದು ಕುದುರೆಯ ಉದಾಹರಣೆ ಕೊಟ್ಟಿದ್ದಾರೆ.
PublicNext
11/01/2021 04:14 pm