ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಮಾಂಸ ತಿನ್ನುವುದೇ ಮೈಸೂರು ನಾಯಕನ ಸಾಧನೆ: ಯಡಿಯೂರಪ್ಪ

ಮೈಸೂರು: ಗೋಮಾಂಸ ತಿನ್ನುವುದೇ ಮೈಸೂರಿನ ಮುಖಂಡನ ದೊಡ್ಡ ಸಾಧನೆ. ಕಾಂಗ್ರೆಸ್‌ ಪಕ್ಷ ಈಗ ಎಲ್ಲಿದೆ? ಸುಮ್ಮನೇ ಪದೇ ಪದೇ ಯಾಕೆ ಅವರನ್ನು ನಾವು ನೆನಪು ಮಾಡಿಕೊಳ್ಳಬೇಕು? ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲಾದರೂ ಅವರ ನಾಯಕತ್ವ ಇದೆಯೇ? ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಮೈಸೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ‘ಜನ ಸೇವಕ್‌’ ಸಮಾವೇಶವನ್ನು ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು.

ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವಂತದ್ದಲ್ಲ. ಅನೇಕ ರೀತಿಯಲ್ಲಿ ಅವರು ಟೀಕಿಸುತ್ತಿದ್ದಾರೆ. ನಮ್ಮನ್ನು ಕೆಣಕುತ್ತಿದ್ದಾರೆ. ಮಾಧ್ಯಮಗಳಿಗೆ ನಾನು ಏನು ಪ್ರತಿಕ್ರಿಯೆ ಕೊಡಬಹುದು ಎಂಬುದನ್ನು ನೋಡುತ್ತ ಕಾದು ಕೂತಿರುತ್ತಾರೆ. ಹಿಗಾಗಿ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡೋದನ್ನೇ ಕಡಿಮೆ ಮಾಡಿದ್ದೇನೆ ಎಂದರು.

Edited By : Nagaraj Tulugeri
PublicNext

PublicNext

11/01/2021 03:31 pm

Cinque Terre

33.98 K

Cinque Terre

1

ಸಂಬಂಧಿತ ಸುದ್ದಿ