ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮಹೂರ್ತ ಫೀಕ್ಸ್ ಆಗಿದೆ.
ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದ ಸಿಎಂ ಯಡಿಯೂರಪ್ಪ ಮರಳಿ ಬೆಂಗಳೂರಿಗೆ ವಾಪಸ್ ಬಂದಿದ್ದು ಸಂಪುಟ ವಿಸ್ತರಣೆಯ ವಿಚಾರವನ್ನು ಖಚಿಪಡಿಸಿದ್ದಾರೆ.
ಜ. 13, ಬುಧವಾರ ಸಂಪುಟ ವಿಸ್ತರಣೆ ಆಗಬಹುದು ಎಂಬ ಸುಳಿವು ನೀಡಿದ್ದಾರೆ. ಅಲ್ಲದೆ, ಆರು ಅಥವಾ ಏಳು ಮಂದಿಗೆ ಸಂಪುಟ ಸೇರ್ಪಡೆಯ ಭಾಗ್ಯ ಸಿಗುವ ಸಾಧ್ಯತೆಯೂ ಹೆಚ್ಚಿದೆ.
ಆದ್ರೆ ಸಂಪುಟದಲ್ಲಿ ಯಾರು ಇನ್ ಯಾರು ಔಟ್ ಎನ್ನುವುದು ನಿಗೂಢವಾಗಿಯೇ ಉಳಿದಿದೆ. ಇಂದು ನಡೆಯಲಿರುವ ಬಿಜೆಪಿ ನಾಯಕರ ಸಭೆಯಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ.
ಕೆಲ ಮೂಲಗಳ ಪ್ರಕಾರ ಸಂಕ್ರಾಂತಿ ಹಬ್ಬ ಕಳೆದ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎನ್ನಲಾಗುತ್ತಿದೆ.
ನಿನ್ನೆ ರಾತ್ರಿ 10:20ಕ್ಕೆ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಇದೇ 13ರಂದು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಏಳು ಶಾಸಕರು ಸಂಪುಟ ಸೇರಲಿದ್ದಾರೆ ಎಂದಿದ್ದಾರೆ.
PublicNext
11/01/2021 08:07 am