ನವದೆಹಲಿ: ನವದೆಹಲಿಯ ಗಡಿಯಲ್ಲಿ ಪ್ರತಿಭಟನಾನಿರತ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿಜ್ವರ ಹರಡುತ್ತಿದೆ ಎಂದು ಬಿಜೆಪಿ ಶಾಸಕ ಮದನ್ ದಿಲ್ವಾರ್ ಆರೋಪಿಸಿದ್ದಾರೆ. ಈ ಮೂಲಕ ಪ್ರತಿಭಟನಾ ಸ್ಥಳಗಳಲ್ಲಿ ಕೋಳಿ ಮಾಂಸ ಸೇವಿಸಿ ಹಕ್ಕಿ ಜ್ವರ ಹರಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಸೋ ಕಾಲ್ಡ್ ರೈತರಿಗೆ ದೇಶದ ಬಗ್ಗೆ ಆತಂಕವಿಲ್ಲ, ರುಚಿಯಾದ ಆಹಾರದ ಜೊತೆ ಪಿಕ್‌ನಿಕಲ್ಲಿ ಮೋಜು ಮಾಡುವಂತೆ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸದಿದ್ದರೆ ಹಕ್ಕಿಜ್ವರ ದೇಶದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಲಿದೆ ಎಂದು ದಿಲ್ವಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲ ಸೋ ಕಾಲ್ಡ್ ರೈತರು ಹೋರಾಟ ನಡೆಸುತ್ತಿದ್ದಾರೆ. ಇನ್ನು ಕೆಲ ರೈತರು ಯಾವುದೇ ಚಳವಳಿಯಲ್ಲಿ ತೊಡಗಿಸಿಕೊಂಡಿಲ್ಲ ಆದರೆ, ಚಿಕನ್ ಬಿರಿಯಾನಿ, ಡ್ರೈಪ್ರೂಟ್ಸ್ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿ ಜ್ವರ ಹರಡುವ ಶಂಕೆ ಇರುವುದಾಗಿ ಅವರು ಕಿಡಿ ಕಾರಿದ್ದಾರೆ.
PublicNext
10/01/2021 06:48 pm