ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಡಿಯೂರಪ್ಪ-ಶಾ ಭೇಟಿ: ಸಂಕ್ರಾಂತಿ ನಂತರ ಸಂಪುಟದಲ್ಲಿ "some ಕ್ರಾಂತಿ"

ಹೊಸ ದಿಲ್ಲಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅಮಿತ್ ಶಾ ಅವರ ನಿವಾಸಕ್ಕೆ ತೆರಳಿದ ಯಡಿಯೂರಪ್ಪ, ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಉಪಸ್ಥಿತರಿದ್ದರು.

ನಾಯಕತ್ವ ಬದಲಾವಣೆಗೆ ಗುಸು ಗುಸುಗಳ ನಡುವೆ ಯಡಿಯೂರಪ್ಪ ಹಾಗೂ ಅಮಿತ್ ಶಾ ಅವರ ಸೌಹಾರ್ದಯುತ ಭೇಟಿ ಎಲ್ಲಾ ವದಂತಿಗಳಿಗೂ ತೆರೆ ಎಳೆಯುವ ನಿಟ್ಟಿನಲ್ಲಿ ಮಹತ್ವದ ಸಂದೇಶ ರವಾನಿಸಿದೆ ಎನ್ನಬಹುದು. ಏಕೆಂದರೆ ಈ ಹಿಂದೆ ಯಡಿಯೂರಪ್ಪ ದಿಲ್ಲಿಗೆ ಭೇಟಿ ನೀಡಿದ್ದಾಗಲೂ ವರಿಷ್ಠರ ಭೇಟಿಗೆ ಅವಕಾಶ ಸಿಗದೆ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಾಧ್ಯವಾಗದೇ ಬರಿಗೈನಲ್ಲಿ ಬರಬೇಕಾಗಿತ್ತು. ಇದೀಗ ಸಚಿವಾಕಾಂಕ್ಷಿಗಳು, ಯಡಿಯೂರಪ್ಪ ಅವರು ದಿಲ್ಲಿಯಿಂದ ಸಿಹಿ ಸುದ್ದಿ ಹೊತ್ತು ತರುವ ನಿರೀಕ್ಷೆಯಲ್ಲಿದ್ದಾರೆ.

Edited By : Nagaraj Tulugeri
PublicNext

PublicNext

10/01/2021 06:04 pm

Cinque Terre

88.64 K

Cinque Terre

2

ಸಂಬಂಧಿತ ಸುದ್ದಿ