ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷತೆ ಜವಾಬ್ದಾರಿ ರಕ್ಷಾ ರಾಮಯ್ಯ ಹೆಗಲಿಗೆ?

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗೆ ಜನವರಿ 12ರಂದು ಚುನಾವಣೆ ನಡೆಯಲಿದ್ದು, ರಕ್ಷಾ ರಾಮಯ್ಯ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಅಖಿಲ ಭಾರತ ಕಾಂಗ್ರೆಸ್ ಕಮಿಟಿಗೆ ಆನ್‌ಲೈನ್ ಚುನಾವಣೆ ನಡೆಸಬೇಕೋ ಅಥವಾ ಬೇಡವೋ ಎನ್ನುವ ಗೊಂದಲ ಎದುರಾಗಿದೆ. ನಾಮಪತ್ರ ಸಲ್ಲಿಸಿದ್ದ ಮಿಥುನ್ ರೈ ವಾಪಸ್ ಪಡೆದಿದ್ದಾರೆ. ಆದರೆ ರಕ್ಷಾ ರಾಮಯ್ಯ ಅವರಿಗೆ ಮೊಹಮದ್ ನಲಪಾಡ್, ಎಚ್.ಎಸ್.ಮಂಜುನಾಥ್ ಸ್ಪರ್ಧೆ ಒಡ್ಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇತರೆ ಹಿರಿಯ ನಾಯಕರು ಅಭ್ಯರ್ಥಿಗಳು ನಾಮಪತ್ರ ವಾಪಸ್ ತೆಗೆದುಕೊಳ್ಳಲು ಮನವೊಲಿಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

Edited By : Vijay Kumar
PublicNext

PublicNext

10/01/2021 10:07 am

Cinque Terre

56.47 K

Cinque Terre

3