ಬೆಂಗಳೂರು: ವಂಚನೆ ಪ್ರಕರಣದ ಆರೋಪಿ ಯುವರಾಜ್ ಸ್ವಾಮಿ ನಡೆ, ವೇಷಭೂಷಣ ನೋಡಿ ದೈವಭಕ್ತ ಇರಬೇಕು ಎಂದುಕೊಂಡಿದ್ದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಯುವರಾಜ್ ಜೊತೆಗಿನ ತಮ್ಮ ಫೋಟೋ ವೈರಲ್ ಆಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯುವರಾಜ್ ನಮ್ಮ ಕ್ಷೇತ್ರದ ಮತದಾರ. ಒಮ್ಮೆ ಮನೆಗೆ ಕರೆದಾಗ ಹೋಗಿ ಬಂದಿದ್ದೆ. ಈಗ ಅನಿಸ್ತಿದೆ ಅವನ ಮನೆಗೆ ಹೋಗಿದ್ದು ತಪ್ಪು ಅಂತ. ಫೋಟೋ ಯಾರು ತೆಗೆದರೋ ಗೊತ್ತಿಲ್ಲ, ಆತ ನಾಲ್ಕೈದು ಬಾರಿ ಕರೆ ಮಾಡಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.
ಯುವರಾಜ್ ಮಹಾ ಬುದ್ಧಿವಂತ ಅನ್ಕೊಂಡಿದ್ದೆ, ಇಂಥ ಬುದ್ಧಿವಂತ ಅಂತ ಗೊತ್ತಿರಲಿಲ್ಲ. ಆತನ ಮನೆಯಲ್ಲಿ ಕಾಫಿ ಕುಡಿದಿದ್ದೆ, ಆತ ಕೊಟ್ಟ ತಟ್ಟೆ ನೋಡಿಯೇ ದಂಗಾಗಿದ್ದೆ. ಆಗ ನಾನು ಇದೇನು ಸ್ವಾಮಿ ಅಂತ ಹೇಳಿದ್ದೆನು. ಆತನ ಹೆಸರು ಮೊದಲು ಯಾವಾಗ ಕೇಳಿದ್ದು ನೆನಪಿಲ್ಲ. ಆತನನ್ನ ಬೇರೆಲ್ಲೂ ನಾನು ನೋಡಿಲ್ಲ. ಆತ ನನಗೇನೂ ವಂಚನೆ ಮಾಡಿಲ್ಲ. ಯಾರಿಗೆ ವಂಚಿಸಿದ್ದಾನೆ ಎಂದೂ ನನಗೆ ಗೊತ್ತಿಲ್ಲ. ಆತನ ವೇಷಭೂಷಣ ನೋಡಿ ದೈವ ಭಕ್ತಕೊಂಡಿದ್ದೆನು. ಹೀಗಾಗಿ ಅವನ ಮನೆಗೆ ಹೋಗಿದ್ದೆ ಅಷ್ಟೇ ಎಂದು ಹೇಳಿದರು.
PublicNext
09/01/2021 05:06 pm