ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡಿ.ಕೆ.ಶಿವಕುಮಾರ್ ಗೆ ಜನರ ಸಹಿತ ಕಾರ್ಯಕರ್ತರ ಬೆಂಬಲವಿಲ್ಲ; ಶೋಭಾ ವ್ಯಂಗ್ಯ

ಮಂಗಳೂರು: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಜೊತೆಗೆ ಆತಂಕಗೊಂಡಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಮಂಗಳೂರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ವಿಚಲಿತಗೊಂಡಿದೆ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಎಲ್ಲಾ ಚುನಾವಣೆಯಲ್ಲಿ ಸೋಲು ಕಂಡಿದೆ. ಇದರಿಂದ ವಿಚಲಿತರಾಗಿರುವ ಡಿ.ಕೆ.ಶಿ ರಾಜ್ಯ ಸರಕಾರದ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ರಿಗೆ ಜನ ಬೆಂಬಲವಿಲ್ಲ, ಕಾರ್ಯಕರ್ತರ ಬೆಂಬಲವೂ ಇಲ್ಲ ಎಂದು ವ್ಯಂಗ್ಯವಾಡಿದ ಅವರು ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳನ್ನೇ ಡಿಕೆಶಿ ಫಾಲೋ ಮಾಡ್ತಿದ್ದಾರೆ.

ಸಿದ್ದರಾಮಯ್ಯ ಅವರೇ ಡಿಕೆಶಿಯವರ ಕಾರ್ಯಶೈಲಿ ಒಪ್ಪುತ್ತಿಲ್ಲ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ,ಪ್ರಧಾನ ಮಂತ್ರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಜನರು ಜಾಗೃತರಾಗಿದ್ದಾರೆ,ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ರು.

ಇನ್ನು ಸಿದ್ದರಾಮಯ್ಯ ವಿಚಾರವಾದಿ ನಾಯಕ ಇರಬಹುದು ಆದ್ರೆ ಅವರು ಕೊಡವರ ಮತ್ತು ಹಿಂದುಗಳ ಭಾವನೆಗೆ ಧಕ್ಕೆ‌ ಮಾಡ್ತಿದ್ದಾರೆ. ಕೊಡವರು ಗೋಮಾಂಸ ತಿಂತಾರೆ ಅಂತ ಅವರು ಹೇಳ್ತಾರೆ. ಒಂದು ಜನಾಂಗದ ಓಲೈಕೆಗೆ ಸಿದ್ದರಾಮಯ್ಯ ಭಾವನೆಗೆ ಧಕ್ಕೆ ತರ್ತಿದ್ದಾರೆ

ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

Edited By : Manjunath H D
PublicNext

PublicNext

09/01/2021 01:13 pm

Cinque Terre

70.94 K

Cinque Terre

6

ಸಂಬಂಧಿತ ಸುದ್ದಿ