ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ನಾನು ಹೋಗೋದಿಲ್ಲ: ಟ್ರಂಪ್

ವಾಷಿಂಗ್ಟನ್: ಜನವರಿ 20ಕ್ಕೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ನಿರ್ಧಾರದ ಮೂಲಕ, ಶಾಂತಿಯುತ ಅಮೆರಿಕದ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮೊದಲ ನಿರ್ಗಮಿತ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಪಾ್ತ್ರರಾಗುತ್ತಿದ್ದಾರೆ. ತಮ್ಮ ಅಧಿಕಾರಾವಧಿಯ ಕಡೆಯ ದಿನಗಳನ್ನು ಹೇಗೆ ಕಳೆಯುತ್ತಾರೆ ಎಂಬ ಬಗ್ಗೆ ಡೊನಾಲ್ಡ್ ಟ್ರಂಪ್ ತುಟಿ ಬಿಚ್ಚಿಲ್ಲ.

ಸಂಸತ್ ಭವನದಲ್ಲಿ ತಮ್ಮ ಬೆಂಬಲಿಗರು ದಾಂಧಲೆ ನಡೆಸಿದ ಕಹಿ ಘಟನೆ ನಡೆದು ಎರಡು ದಿನಗಳ ಬಳಿಕ ಡೊನಾಲ್ಡ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. “ಜನವರಿ 20 ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಹೋಗುತ್ತಿಲ್ಲ, ಯಾರೆಲ್ಲ ಈ ಬಗ್ಗೆ ಕೇಳಿದ್ದರೋ ಅವರಿಗೆ ಇದೋ ನನ್ನ ಉತ್ತರ,” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

08/01/2021 11:10 pm

Cinque Terre

67.21 K

Cinque Terre

7

ಸಂಬಂಧಿತ ಸುದ್ದಿ