ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದನದ ಮಾಂಸ ತಿನ್ಬೇಕೆಂದರೆ ತಿನ್ತೀನಿ, ನೀ ಯಾವನಯ್ಯಾ ಕೇಳೋಕೆ ಎಂದು ಕೇಳಿದ್ದು ನಿಜ - ಸಿದ್ದರಾಮಯ್ಯ

ಚಿಕ್ಕಮಗಳೂರು: ಏನು ಎಲ್ಲರೂ ನನ್ನ ವಿರುದ್ಧ ಟೀಕೆ ಮಾಡಿದ್ದೇ ಮಾಡಿದ್ದು. ಹೌದು ನಾನು ಒರಟ. ನಾನು ಹಳ್ಳಿಯವನು. ಹಳ್ಳಿ ಭಾಷೆ ಮಾತಾಡ್ತೀನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗಿದ್ದಾರೆ.

ಬಿಜೆಪಿ, ಜೆಡಿಎಸ್​​ನವರು ಎಲ್ಲರೂ ನನ್ನ ಮೇಲೆ ಬೀಳ್ತಾರೆ. ನಾನೊಬ್ಬನೇ ಸಿಕ್ಕಿರುವುದು ಎಲ್ಲರಿಗೂ ಟೀಕೆ ಮಾಡಲು. ಬಿಜೆಪಿಯವ್ರು ಗೋಮಾಂಸ ನಿಷೇಧ ಕಾಯ್ದೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸವನ್ನು ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿಂತೀನಿ ಅಂದಿದ್ದೆ. ನನ್ನಿಷ್ಟ ನೀನು ಯಾವನ್ ಕೇಳಕ್ಕೆ ನಾನು ತಿಂತೀನಿ ಅಂದೆ. ಈ ಹೇಳಿಕೆಗೆ ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು! ಎಲ್ಲರಿಗೂ ನಾನೊಬ್ಬನೇ ಟೀಕೆ ಮಾಡಲು ಸಿಕ್ಕಿರುವುದು ಎಂದು ಕಡೂರಲ್ಲಿ ಸಿದ್ದರಾಮಯ್ಯ ಹೇಳಿದರು.

ಚುನಾವಣೆಯಲ್ಲಿ ಓಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದುಕೊಂಡ ಹೋದ. ಅವತ್ತು ಕೋಳಿ ಮಾಡಿದ್ರು. ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ. ಅದಕ್ಕೆ, ಹನುಮಂತ ಹುಟ್ಟಿದ್ದು ಯಾರಿಗೆ ಗೊತ್ತು, ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ? ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು ಟೀಕೆ ಮಾಡಲು ಎಂದು ಸಹ ಹೇಳಿದರು.

Edited By : Nagaraj Tulugeri
PublicNext

PublicNext

07/01/2021 08:40 pm

Cinque Terre

134.49 K

Cinque Terre

52

ಸಂಬಂಧಿತ ಸುದ್ದಿ