ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಿನ್ನ ಹೆಂಡ್ತಿ ಸೀರೆ ಯಾವ್ ಸೋಪ್‌ನಿಂದ ತೊಳೆಯುತ್ತೀಯಾ': ನಾಲಿಗೆ ಹರಿಬಿಟ್ಟ ಮಾಧುಸ್ವಾಮಿ

ತುಮಕೂರು: ನಿನ್ನ ಹೆಂಡ್ತಿ ಸೀರೆ ಯಾವ್ ಸೋಪ್‌ನಿಂದ ತೊಳೆಯುತ್ತೀಯಾ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಚಿವರು ಗುಬ್ಬಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಅವರನ್ನು ತರಾಟೆಗೆ ತೆಗೆದುಕೊಂಡರು. 'ಜಾಡ್ಸಿ ಒದ್ದರೆ ಎಲ್ಲಿಗೆ ಹೋಗಿ ಬೀಳ್ತೀಯಾ ಗೊತ್ತಾ? ಕೆಲಸ ಮಾಡದೆ ಹೆಂಡ್ತಿಗೆ ಸೀರೆ ತೆಗೆದುಕೊಳ್ಳೋಕೆ ಹೋಗಿದ್ಯಾ? ಮೊದಲು ಇವನನ್ನು ಕೆಲಸದಿಂದ ವಜಾ ಮಾಡಿ' ಎಂದು ಏಕವಚನದಲ್ಲೇ ಗುಡುಗಿದರು.

ಜಿಲ್ಲೆಯ ಪಿಆರ್‌ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಯಾರು ಕೆಲಸ ಮಾಡುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ನಿಲ್ಲಿಸಿ. ನಾನು ಹೇಳೋವರೆಗೂ ಸಂಬಳ ಕೊಡಬೇಡಿ. ಇಡೀ ಜೀವಮಾನ ಪ್ರಮೋಷನ್ ಸಿಗದಂತೆ ಮಾಡಿ ಎಂದು ಸಿಇಒ ಶುಭ ಕಲ್ಯಾಣ್ ಅವರಿಗೆ ಸಚಿವರು ಸೂಚಿಸಿದರು.

ಅಷ್ಟೇ ಅಲ್ಲದೆ ತುಮಕೂರು ವಿಭಾಗದ ಪಿಆರ್‌ಇಡಿಯ ಎಇಇ ಹರೀಶ್ ಬಾಬು ವಿರುದ್ಧ ಗುಡುಗಿದ ಮಾಧುಸ್ವಾಮಿ ಅವರು, ''ನೀನು ಕೆಲಸ ಮಾಡದಿದ್ದರೂ ನಿನ್ನ ರಕ್ಷಣೆಗೆ ನಿಲ್ಲುವ ಸೀರೆ ಸುತ್ತುವ ಆ ಕೃಷ್ಣ ಯಾರು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

Edited By : Vijay Kumar
PublicNext

PublicNext

07/01/2021 12:44 pm

Cinque Terre

84.68 K

Cinque Terre

20

ಸಂಬಂಧಿತ ಸುದ್ದಿ