ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೈರಪ್ಪ ರೈತರ ಬಗ್ಗೆ ಯಾಕೆ ಮಾತನಾಡೋದಿಲ್ಲ?: ದೇವನೂರು ಪ್ರಶ್ನೆ

ಮೈಸೂರು: ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಮಂಗಳವಾರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ನಗರದಲ್ಲಿ ಸ್ವರಾಜ್ ಇಂಡಿಯಾ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.

ದೆಹಲಿ ರೈತರ ಹೋರಾಟದಲ್ಲಿ ಪಂಜಾಬ್ ನವರು ಮಾತ್ರ ಭಾಗಿಯಾಗುತ್ತಿರುವುದಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಂಜಾಬ್ ಮಾತ್ರವಲ್ಲದೆ, ಉತ್ತರಾಖಂಡ, ಹರಿಯಾಣ ಸೇರಿದಂತೆ ಹಲವು ರಾಜ್ಯದ ಜನರು ಭಾಗಿಯಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಅವರಿಗೇಕೆ ತಿಳಿದಿಲ್ಲ? ಅವರಿಗೆ ಕಿವಿ ಕೇಳುತ್ತಿಲ್ಲವೇ? ಕಣ್ಣು ಕಾಣುತ್ತಿಲ್ಲವೇ? ಸಂವೇದನೆ ಇಲ್ಲವೇ? ಇದನ್ನೆಲ್ಲ ಮಾಧ್ಯಮದವರು ಅವರಿಗೆ ತಿಳಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಪ್ರತಿಭಟನೆಯು ಪರಿಣಾಮಕಾರಿಯಾಗದೇ ಇರಬಹುದು. ಆದರೆ, ರೈತರೊಂದಿಗೆ ಕಾರ್ಮಿಕರು, ದಲಿತರು ಹಾಗೂ ಮಹಿಳೆಯರು ಕೈಜೋಡಿಸಿ ಪ್ರತಿಭಟನೆ ನಡೆಸುತ್ತಿರುವುದು ಹೆಚ್ಚಿನ ಮೌಲ್ಯವನ್ನು ನೀಡಿದೆ. ಈ ಪ್ರತಿಭಟನೆಯ ಸುಳ್ಳು, ದ್ವೇಷ ಹಾಗೂ ಅಸಹಿಷ್ಣುತೆಯ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

06/01/2021 04:44 pm

Cinque Terre

51.11 K

Cinque Terre

8

ಸಂಬಂಧಿತ ಸುದ್ದಿ