ಬೆಂಗಳೂರು: ಮಧ್ಯ ಕರ್ನಾಟಕ ಭಾಗದ ನಾನು ಹೊನ್ನಾಳಿ ಮೂಲದವನು. ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ನಾನು ಹೊನ್ನಾಳಿಯ ಅಂಜದ ಗಂಡು’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ನನ್ನ ಪಕ್ಷ ತಾಯಿ ಸಮಾನ. ನಾನು ತಾಯಿಯನ್ನು ಗೌರವಿಸುತ್ತೇನೆ. ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹೋರಾಟದಿಂದಲೇ ಬಂದು ಈಗ ಮುಖ್ಯಮಂತ್ರಿ ಆಗಿದ್ದಾರೆ. ಯಾರೂ ವಿನಾ ಕಾರಣ ಪಕ್ಷ, ನಾಯಕರ ಬಗ್ಗೆ ಮಾತನಾಡಬಾರದುಎಂದರು.
ಹಾಗಂತ ನಾನು ಯಡಿಯೂರಪ್ಪ ಪರವಾಗಿಯೂ ಬ್ಯಾಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ಳದೆ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ‘ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾರಿಗೂ ಹೆದರುವವನು ಅಲ್ಲ. ಯಾರನ್ನೂ ಹೆದರಿಸಿಲ್ಲ’ ಎಂದೂ ಹೇಳಿದರು.
PublicNext
06/01/2021 04:00 pm