ಬೆಂಗಳೂರು: ಎಲ್ಲದಕ್ಕೂ ನಿಮ್ಮ ಮಗನೇ ಅಂತಿಮವಾದ್ರೆ ಪಕ್ಷಕ್ಕಾಗಿ ದುಡಿದವರ ಗತಿ ಏನು? ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದರು. ಆದರೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಸಿಎಂ ಯಡಿಯೂರಪ್ಪ ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಬಿಜೆಪಿ ಶಾಸಕರ ಜೊತೆಗಿನ ಸಭೆಯಲ್ಲಿ ರೇಣುಕಾಚಾರ್ಯ ವಿಜಯೇಂದ್ರ ಪರ ಮತಾನಾಡಿದ್ದಾರೆ. ''ಅಪ್ಪನ ಜೊತೆಯಲ್ಲಿ ಮಗನಿದ್ದರೆ ತಪ್ಪೇನು? ಸಚಿವರು, ಶಾಸಕರ ಜೊತೆ ಅವರ ಹೆಂಡತಿ, ಮಕ್ಕಳಿಲ್ಲವಾ? ನಿಮ್ಮ ಕುಟುಂಬದವರ ಜೊತೆ ನೀವೆಲ್ಲರೂ ಇರಬಹುದು. ವಿಜಯೇಂದ್ರ ಅಪ್ಪನ ಜೊತೆ ಇದ್ದರೆ ಅದು ತಪ್ಪಾಗುತ್ತಾ'' ಎಂದು ಖಾರವಾಗಿ ಪ್ರಶ್ನಿಸಿ ಪರೋಕ್ಷವಾಗಿ ಯತ್ನಾಳ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
PublicNext
05/01/2021 07:49 pm