ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ಕಾರವನ್ನ ಎಚ್ಚರಿಸಿದ ಸುಬ್ರಹ್ಮಣ್ಯಂ ಸ್ವಾಮಿ

ನವದೆಹಲಿ: ಕೊರೊನಾ ವೈರಸ್‌ ಭಾರತ ಅಷ್ಟೇ ಅಲ್ಲದೆ ವಿಶ್ವದ ಆರ್ಥಿಕತೆ ಮೇಲೆ ಭಾರೀ ಹೊಡೆತಕೊಟ್ಟಿದೆ. ಈಗ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರ ಮತ್ತೆ ತಲೆನೋವಾಗಿ ಪರಿಣಮಿಸಿದೆ. ಭಾರತದಲ್ಲಿ ಈಗಾಗಲೇ 1 ಕೋಟಿಗೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೆ ಸುಮಾರು 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಈ ನಡುವೆ ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಟ್ವೀಟ್ ಮಾಡಿರುವ ಸುಬ್ರಹ್ಮಣ್ಯಂ ಸ್ವಾಮಿ, "ಕೊರೊನಾ ಲಸಿಕೆ ಸಂಭ್ರಮದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಲಡಾಖ್‌ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಚೀನಾ‌ ಆಕ್ರಮಿಸಿರುವುದನ್ನು ಮರೆಯಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಅರ್ಥಶಾಸ್ತ್ರಜ್ಞರಾಗಿರುವ ಸುಬ್ರಹ್ಮಣ್ಯಂ ಸ್ವಾಮಿ ಅವರು ಆಗಾಗ್ಗೆ ತಮ್ಮದೇ ಬಿಜೆಪಿ ಸರ್ಕಾರದ ಹಾಗೂ ಕೇಂದ್ರ ಸಚಿವರುಗಳ ವಿರುದ್ಧ ಚಾಟಿ ಬೀಸುತ್ತಾರೆ. ಜೊತೆಗೆ ಚೀನಾ ಗಡಿ ತಗಾದೆ ತೆಗೆದು ಭಾರತದ ಭೂಪ್ರದೇಶದ ಒಳಗೆ ಕಾಲಿಟ್ಟಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

Edited By : Vijay Kumar
PublicNext

PublicNext

05/01/2021 03:28 pm

Cinque Terre

62.53 K

Cinque Terre

2

ಸಂಬಂಧಿತ ಸುದ್ದಿ